ಇದೆ ನಾಡು ಇದೆ ಭಾಷೆ ಎಂದೆಂದೂ ನಮ್ಮದಾಗಿರಲಿ, ಎಲ್ಲೇ ಇರಲಿ ಹೇಗೆ ಇರಲಿ ಕನ್ನಡವೇ ನಮ್ಮ ಉಸಿರಲ್ಲಿ
ಕೇಂಬ್ರಿಡ್ಜ್ ಕನ್ನಡ ಕಲಿ ಶಾಲೆಗೆ ಸುಸ್ವಾಗತ
ಭಾರತದ ಪುರಾತನವಾದ ಭಾಷೆಗಳಲ್ಲಿ ಒಂದಾದ ಕನ್ನಡ, ಭಾರತದ ಭಾಷೆಗಳಲ್ಲಿ ೪ನೆಯ ಗೌರವ ಸ್ಥಾನ ಹೊಂದಿದೆ. ಭಾರತದಲ್ಲಿ ೫೫ ದಶಲಕ್ಷ ಕನ್ನಡಿಗರಿದ್ದಾರೆ.
ನಮ್ಮ ಶಾಲೆಯ ಉದ್ದೇಶ - ಕನ್ನಡ ಬಳಗದ ಮಕ್ಕಳಿಗೆ ಕನ್ನಡವನ್ನು ಕಲಿಯುವ ಅವಕಾಶ ಒದಗಿಸುವುದು , ಅದಕ್ಕೆ ಬೇಕಾಗುವ ಪರಿಸರ ನಿರ್ಮಾಣ ಮಾಡಿ ಮಕ್ಕಳಿಗೆ ಸರ್ವೋತ್ಮುಖ ಪ್ರತಿಭೆ ಮತ್ತು ಸಾಮರ್ಥ್ಯವನ್ನು ಹೆಚ್ಚಿಸಲು ಪ್ರೊತ್ಸಾಹ ನೀಡುವುದು ಹಾಗೂ ಈ ಮೂಲಕ ಕನ್ನಡ ಸಂಸ್ಕೃತಿಯನ್ನು ಪರಿಚಯಿಸಿವುದು.
ನಮ್ಮ ಶಾಲೆಯು ಕನ್ನಡ ಆಕಾಡೆಮಿಯ ಜೊತೆಗೊಡಿ ಮೋಜಿನ ವಾತಾವರಣದಲ್ಲಿ ಸಂವಾದಾತ್ಮಕ ಪಠ್ಯಕ್ರಮದಿಂದ ಕನ್ನಡ ಕಲಿಸುವಲ್ಲಿ ಮುಂದಾಗಿದೆ.
Welcome to Cambridge Kannada Kali school
Our aim is to provide children with an opportunity to learn our mother tongue Kannada ,provide a learning environment where children develop talents, reach their potential, be happy during their time with us and promote the culture of Karnataka.
Kannada is one of the oldest language in the world. Hailing the rich heritage of Karnataka, we are a group of proud Kannadigas who are passionate about Kannada language and literature.
We have joined hands with Kannada Academy to provide a curriculum where teaching is fun, interactive and enriching.
ದೃಷ್ಟಿ ಹೇಳಿಕೆ
ಕನ್ನಡ ಭಾಷೆಯು ಪುರಾತನ ಹಾಗೂ ಭಾರತದ ರಾಷ್ಟ್ರೀಯ ಭಾಷೆಗಳಲ್ಲಿ ಒಂದು. ಯು. ಕೆ. ಕನ್ನಡಿಗರ ಮುಂದಿನ ಪೀಳಿಗೆಗೆ ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಕಲಿಸಿ, ಬೆಳೆಸುವುದು ಕೇಂಬ್ರಿಡ್ಜ್ ಕನ್ನಡ ಶಾಲೆಯ ದೃಷ್ಟಿ. ಕನ್ನಡ ಸಾಹಿತ್ಯದಲ್ಲಿ ಅಭಿರುಚಿ ಬೆಳೆಸುವುದು, ಸೃಜನಾತ್ಮಕ ಬರವಣಿಗೆ, ಕಥೆ ಓದುವುದು ಹಾಗೂ ಕೇಳುವುದು, ಕನ್ನಡದ ಗೀತೆಗಳ ಪರಿಚಯ, ಕನ್ನಡಕ್ಕೆ ಸಂಭಂದಿಸಿದ ನಿರಂತರ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದು ನಮ್ಮ ಧ್ಯೇಯ.
ನಮ್ಮ ಗುರಿ
ಕನ್ನಡ ಓದುವ ಹಾಗೂ ಬರೆಯುವ ಅಭ್ಯಾಸ ಬೆಳೆಸುವುದು, ಮಕ್ಕಳಿಗೆಂದೇ ಬರೆಯುವ ಮತ್ತು ಮಕ್ಕಳಿಂದ ಬರೆಸುವ ಚಟುವಟಿಕೆಗಳು, ವ್ಯಾವಹಾರಿಕ ಕನ್ನಡ ಕಲಿಕೆ, ಕನ್ನಡ ವ್ಯಾಕರಣ ಕಲಿಕೆ, ಕನ್ನಡ ಸಂಸ್ಕೃತಿಯನ್ನು ಪರಿಚಯ ಮಾಡುವ ಚಟುವಟಿಕೆಗಳನ್ನು ಆಯೋಜಿಸುವುದು ನಮ್ಮ ಗುರಿ.